ನಮ್ಮ ಕುರಿತು


ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್ (ರಿ)

ನೋಂದಣಿ ಸಂಖ್ಯೆ : DWR-4-00166-2012-13


ಗೌರವಾಧ್ಯಕ್ಷರು
 
ಹಿರಿಯ ವಿಮರ್ಶಕರು. ೪೦ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ. ಭುವನದ ಭಾಗ್ಯ, ಕನ್ನಡ ಕಥನ ಸಾಹಿತ್ಯ : ಕಾದಂಬರಿ, ಕನ್ನಡ ಕಥನ ಸಾಹಿತ್ಯ: ಸಣ್ಣ ಕಥೆ, ವಿರಾಟ ಪುರುಷ: ಶ್ರೀರಂಗ ಸಾರಸ್ವತ ಸಮೀಕ್ಷೆ, ಲೋಕಯಾತ್ರೆ, ಕುವೆಂಪು: ಯುಗದ ಕವಿ, ಗಿರೀಶ ಕಾರ್ನಾಡ ಹಾಗೂ ಭಾರತೀಯ ರಂಗಭೂಮಿ, ಒಮ್ಮುಖ-ಬೇಂದ್ರೆ ವಾಙ್ಮಯದಲ್ಲಿ ತತ್ವ ಮತ್ತು ಕಾವ್ಯ, ನಿಂದ ಹೆಜ್ಜೆ, ನಿರಂತರ, ಶ್ರೀಮದ್ಭಗವದ್ಗೀತೆ-ಶ್ರೀ ಕೃಷ್ಣನ ಯೋಗಶಾಸ್ತ್ರ, The Concept of Comedy, Manohara malgaonkar, A Critical Spectrum, Images and Impressions.Collection of critical essays – Our own voices ಮುಂತಾದವುಗಳು. ನೀರ ಮೇಲಣ ಗುಳ್ಳೆ ಇವರ ಆತ್ಮಕತೆ.
ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಹಾಗೂ ಡಾ. ಬಾಬಾಸಾಹೇಬ ಅಂಬೇಡ್ಕರ್ ಮರಾಠಾವಾಡಾ ವಿದ್ಯಾಪೀಠದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ. ಪಂಪ ಪ್ರಶಸ್ತಿ, ಬೇಂದ್ರೆ ಪ್ರಶಸ್ತಿ, ಕಲಕತ್ತಾ ಭಾರತೀಯ ಭಾಷಾ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾದೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದವುಗಳು ಸಂದಿವೆ.
ಹಾವೇರಿ ಜಿಲ್ಲೆಯ ಬೊಮ್ಮನಹಳ್ಳಿಯಲ್ಲಿ ಮೇ ೮, ೧೯೨೫ರಂದು ಜನನ.
ಡಾ. ಜಿ. ಎಸ್. ಆಮೂರ
 
   
ಗೌರವಾಧ್ಯಕ್ಷರು
 
ಹಿರಿಯ ಕವಿಗಳು. ಕಾವ್ಯಾಕ್ಷಿ, ಭಾವಜೀವಿ, ಆಕಾಶಬುಟ್ಟಿ, ಮಧುಚಂದ್ರ, ದೀಪಧಾರಿ, ಮಣ್ಣಿನ ಮೆರವಣಿಗೆ, ನೆಲ ಮುಗಿಲು ಮುಂತಾದ ಒಟ್ಟು ೧೮ ಕವನ ಸಂಕಲನಗಳು
ಪ್ರಕಟಗೊಂಡಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಣವಿ ಕಾವ್ಯ ಭಂಡಾರ ಎಂಬ ಹೆಸರಿನ ಎರಡು ಸಂಪುಟಗಳನ್ನು ಮತ್ತು ಕಣವಿ ಸಮಗ್ರ ಗದ್ಯದ ಎರಡು ಸಂಪುಟಗಳನ್ನು ಪ್ರಕಟಿಸಿದೆ. Iಟಿviಣiಟಿg ಐiಜಿe ಕೇಂದ್ರ ಸಾಹಿತ್ಯ ಅಕಾದೆಮಿ ಪ್ರಕಟಿಸಿದ ಇವರ ಆಯ್ದ ಕವನಗಳ ಇಂಗ್ಲಿಷ್ ಅನುವಾದ. ಸಂಪಾದಿತ ಕೃತಿಗಳು ೧೩.
೧೯೯೬ರಲ್ಲಿ ಹಾಸನದಲ್ಲಿ ಜರುಗಿದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಆಳ್ವಾಸ್ ನುಡಿಸಿರಿಯ ಸರ್ವಾಧ್ಯಕ್ಷತೆ, ೨೦೧೬ನೇ ಸಾಲಿನ ಮೈಸೂರು ದಸರಾ ಉತ್ಸವವನ್ನು ಉದ್ಘಾಟಿಸುವ ಗೌರವ ಇವರಿಗೆ ಲಭಿಸಿವೆ. ಕೇಂದ್ರ ಸಾಹಿತ್ಯ ಅಕಾದೆಮಿ ಪ್ರಶಸ್ತಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ಬೇಂದ್ರೆ ರಾಷ್ಟ್ರೀಯ ಕಾವ್ಯ ಪ್ರಶಸ್ತಿ, ಅ.ನ.ಕೃ ನಿರ್ಮಾಣ್ ಪ್ರಶಸ್ತಿ, ದೂರದರ್ಶನ ಚಂದನ ಪ್ರಶಸ್ತಿ, ಕರ್ನಾಟಕ ಕವಿರತ್ನ ಪ್ರಶಸ್ತಿ, ಸಿದ್ಧಗಂಗಾ ಪ್ರಶಸ್ತಿ - ಮುಂತಾದವು ಅವರಿಗೆ ಸಂದ ಗೌರವಗಳು.
ಗದಗ ಜಿಲ್ಲೆಯ ಹೊಂಬಳದಲ್ಲಿ ಜೂನ್ ೨೮, ೧೯೨೮ರಂದು ಜನನ.
ನಾಡೋಜ ಚೆನ್ನವೀರ ಕಣವಿ
 
   
ಗೌರವಾಧ್ಯಕ್ಷರು
 
ಗಿರೀಶ ಕಾರ್ನಾಡ ಪ್ರಮುಖ ನಾಟಕಕಾರ, ಚಲನಚಿತ್ರ ನಿರ್ದೇಶಕ, ನಟ. ಹಯವದನ, ಯಯಾತಿ, ಹಿಟ್ಟಿನ ಹುಂಜ, ತುಘಲಕ್, ಮಾನಿಷಾದ, ತಲೆದಂಡ, ನಾಗಮಂಡಲ, ಟಿಪ್ಪು ಸುಲ್ತಾನ ಕಂಡ ಕನಸು, ಅಗ್ನಿ ಮತ್ತು ಮಳೆ, ಮದುವೆಯ ಅಲ್ಬಂ, ಬೆಂದ ಕಾಳು ಆನ್ ಟೋಸ್ಟ್ ಇವರ ನಾಟಕಗಳು. ಮೆಲುಕು ಲೇಖನಗಳ ಸಂಗ್ರಹ, ಆಡಾಡತ ಆಯುಷ್ಯ ಆತ್ಮಕತೆ. ಸೊನಾಟಾ ಅನುವಾದಿತ ನಾಟಕ.
ಹಲವಾರು ಭಾಷೆಗಳ ಚಲನಚಿತ್ರಗಳಲ್ಲಿ ನಟನೆ.
ಇವರ ನಾಟಕಗಳು ಭಾರತೀಯ ಮತ್ತು ವಿದೇಶೀ ಭಾಷೆಗಳಿಗೆ ಅನುವಾದಗೊಂಡಿವೆ. ನಾಗಮಂಡಲ ನಾಟಕ ಯು.ಎಸ್.ಎ.ದಲ್ಲಿ ಮಿನ್ನಿಯಾ ಪೊಲಿಸ್‌ದ ಗತ್ರಿ ಥಿಯೇಟರ್‌ನಲ್ಲಿ ಪ್ರದರ್ಶನಗೊಂಡಿದೆ, ಟಿಪ್ಪುಸುಲ್ತಾನ ಕಂಡ ಕನಸು ಇಂಗ್ಲಂಡಿನ ಬಿಬಿಸಿ ಆಕಾಶವಾಣಿಯಲ್ಲಿ ಇಂಗ್ಲೀಷಿನಲ್ಲಿ ಪ್ರಸಾರ. ಇಂಟರ್‌ನ್ಯಾಷನಲ್ ಥಿಯೇಟರ್‌ನ ಜಾಗತಿಕ ರಂಗಭೂಮಿಯ ರಾಯಭಾರಿ.
ಪದ್ಮಭೂಷಣ, ಜ್ಞಾನಪೀಠ ಪ್ರಶಸ್ತಿ ಮತು ಟಾಟಾ ಸಂಸ್ಥೆಯವರ ಲಿಟರೇಚರ್ ಲೈವ್ ಪ್ರಶಸ್ತಿ ಪುರಸ್ಕೃತರು. ಕೇಂದ್ರ ಸಂಗೀತ ನಾಟಕ ಅಕಾದೆಮಿ ಪ್ರಶಸ್ತಿ, ಹಲವಾರು ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್‌ಗಳಿಗೆ ಭಾಜನರು.

ಮಹಾರಾಷ್ಟ್ರದ ಮಾಥೇರಾನದಲ್ಲಿ ಮೇ ೧೯, ೧೯೩೮ರಲ್ಲಿ ಜನನ.
ಡಾ. ಗಿರೀಶ ಕಾರ್ನಾಡ
 
   
ಸಂಸ್ಥಾಪಕ ಅಧ್ಯಕ್ಷರು
 
ಹಿರಿಯ ವಿಮರ್ಶಕರು. ಕಥೆಗಾರ, ಪ್ರಬಂಧಕಾರ, ವ್ಯಕ್ತಿಚಿತ್ರಕಾರ ಹಾಗೂ ಕವಿ. ಸಣ್ಣಕತೆಯ ಹೊಸ ಒಲವುಗಳು, ನವ್ಯ ವಿಮರ್ಶೆ, ಕಾದಂಬರಿ : ವಸ್ತು ಮತ್ತು ತಂತ್ರ, ಸಾಹಿತ್ಯ ಮತ್ತು ಪರಂಪರೆ, ಇಂಗ್ಲಂಡಿನ ರಂಗಭೂಮಿ, ನಾಟಕ ಸಾಹಿತ್ಯ ಮತ್ತು ರಂಗಭೂಮಿ, ಸಾತತ್ಯ, ವಚನ ವಿನ್ಯಾಸ, ಕನ್ನಡ ಕಾವ್ಯ ಪರಂಪರೆ ಮತ್ತು ಬೇಂದ್ರೆಯವರ ಕಾವ್ಯ, ಪ್ರಮಾಣು, ವಿಲಂಬಿತ ಮೊದಲಾದವುಗಳು ಅವರ ವಿಮರ್ಶಾ ಕೃತಿಗಳು. ರಸವಂತಿ, ಮರ್ಲಿನ್ ಮನ್ರೊ, ಕವನ ಸಂಕಲನಗಳು. ಆ ಮುಖಾ - ಈ ಮುಖಾ, ಒಂದು ಬೇವಿನಮರದ ಕಥೆ, ಮಣ್ಣು (ನೀಳ್ಗತೆ) ಕಥಾಸಂಕಲನಗಳು. ಹಿಡಿಯದ ಹಾದಿ ಪ್ರಬಂಧ ಸಂಕಲನ. ದೇವದತ್ತ ಪಟ್ಟನಾಯಕ ಅವರ (ಮೂಲ: ಇಂಗ್ಲೀಷ) ಜಯ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದು, ಅದು ಕುವೆಂಪು ಭಾಷಾ ಭಾರತಿ ಪ್ರಶಸ್ತಿ ಪಡೆದಿದೆ. ಸಪ್ನಾ ಬುಕ್‌ಹೌಸ್‌ದಿಂದ ಇವರ ಸಮಗ್ರ ಕೃತಿಗಳ ಪ್ರಕಟಣೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಾಗಿ, ಕೀರ್ತಿನಾಥ ಕುರ್ತಕೋಟಿಯವರ ಸಮಗ್ರ ಸಾಹಿತ್ಯ ಸಂಪುಟಗಳ ಸಂಪಾದನೆ. ಇವರ ಹಂಗು ಕಥೆ ಚಲನಚಿತ್ರವಾಗಿದೆ. ಈ ಕಥೆಯ ಹಿಂದಿ ರೂಪಾಂತರ ಉಪಕಾರ ಎನ್ನುವ ಹೆಸರಿನಲ್ಲಿ ದಿಲ್ಲಿ ದೂರದರ್ಶನದ ಧಾರಾವಾಹಿ ಮಾಲಿಕೆಯಲ್ಲಿ ಪ್ರಸಾರವಾಗಿದೆ. ಹಲವಾರು ನಾಟಕಗಳಲ್ಲಿ ಅಭಿನಯ ಮತ್ತು ನಿರ್ದೇಶನ.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ, ಕೇಂದ್ರ ಸಾಹಿತ್ಯ ಅಕಾದೆಮಿಯ ಕಾರ್ಯಕಾರಿ ಮಂಡಳಿಯ ಸದಸ್ಯ, ಜ್ಞಾನಪೀಠ ಕನ್ನಡ ಭಾಷಾ ಮಂಡಳಿಯ ಸದಸ್ಯ - ಹೀಗೆ ಹಲವಾರು ಸಮಿತಿಗಳಲ್ಲಿ ಕಾರ್ಯ ನಿರ್ವಹಣೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ, ದ.ರಾ. ಬೇಂದ್ರೆ ರಾಷ್ಟ್ರೀಯ ಟ್ರಸ್ಟ್ ಪ್ರಶಸ್ತಿ, ಸೇಡಿಯಾಪು ಕೃಷ್ಣಭಟ್ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ ಮೊದಲಾದವುಗಳು ಸಂದಿವೆ. ಪ್ರಸ್ತುತ ಧಾರವಾಡ ಸಾಹಿತ್ಯ ಸಂಭ್ರಮದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾಗಿ ಸೇವೆ
ಸಲ್ಲಿಸಿ ಧಾರವಾಡದಲ್ಲಿ ನೆಲೆಸಿದ್ದಾರೆ.
ಗದಗ ಜಿಲ್ಲೆಯ ಅಬ್ಬಿಗೇರಿಯಲ್ಲಿ ಸಪ್ಟೆಂಬರ್ ೨೨, ೧೯೩೯ರಂದು ಜನನ.
ಡಾ. ಗಿರಡ್ಡಿ ಗೋವಿಂದರಾಜ
 
   
ಅಧ್ಯಕ್ಷರು
 
ರಾಘವೇಂದ್ರ ಪಾಟೀಲ ಕನ್ನಡದ ಮುಖ್ಯ ಕತೆಗಾರರಲ್ಲಿ ಒಬ್ಬರು. ಒಡಪುಗಳು, ಪ್ರತಿಮೆಗಳು, ದೇಸಗತಿ, ಮಾಯಿಯ ಮುಖಗಳು, ಎಷ್ಟು ಕಾಡತಾವ ಕಬ್ಬಕ್ಕಿ ಕಥಾಸಂಕಲನಗಳು. ಬಾಳವ್ವನ ಕನಸು, ತೇರು ಕಾದಂಬರಿಗಳು. ವಾಗ್ವಾದ, ಆನಂದಕಂದ, ಎದೆಗೆ ಎದೆ ಮಿಡಿತ ವಿಮರ್ಶಾಕೃತಿ. ಅಜ್ಞಾತ ಮುಂಬಯಿ ಪ್ರವಾಸ ಕಥನ. ಕಾಡಿನಹುಡುಗ ಕೃಷ್ಣ, ಮಾಸ್ತಿ ಸಾಹಿತ್ಯ ಸಮಗ್ರ ದರ್ಶನ, ಹೊಸಕಾವ್ಯದ ಮುನ್ನೆಲೆ- ೨ ಸಂಪುಟಗಳಲ್ಲಿ, ಸಂಕಿರಣ-ಮೂವರು ಜ್ಞಾನಪೀಠ ವಿಜೇತರ ಕುರಿತು ಸಂಪಾದಿತ ಕೃತಿಗಳು. ಸಮಾಹಿತ ದ್ವೆಮಾಸಿಕದ ಹಾಗೂ ಸಾಹಿತ್ಯ-ಸಂವಾದ ಸಾಂಸ್ಕೃತಿಕ-ಸಾಹಿತ್ಯಕ ಪತ್ರಿಕೆಯ ಸ್ಥಾಪಕ ಸಂಪಾದಕರು.
ಕೇಂದ್ರ ಸಾಹಿತ್ಯ ಅಕಾದೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಎರಡು ಬಾರಿ, ಚದುರಂಗ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಕಾರಂತ ಪುರಸ್ಕಾರ, ಗೊರೂರು ರಾಮಸ್ವಾಮಿ ಪ್ರಶಸ್ತಿ, ಗಳಗನಾಥ ಪ್ರಶಸ್ತಿ, ಮುಂತಾದವುಗಳು ಮತ್ತು ಪ್ರಜಾವಾಣಿ, ಉದಯವಾಣಿ, ಸುಧಾ ಕಥೆ, ಕಾದಂಬರಿ ಸ್ಪರ್ಧೆಗಳಲ್ಲಿ ಬಹುಮಾನ. ಮಲ್ಲಾಡಿಹಳ್ಳಿಯ ಅನಾಥಸೇವಾಶ್ರಮ ಪದವಿ ಪೂರ್ವಕಾಲೇಜಿನ ಪ್ರಾಚಾರ್ಯರಾಗಿ ಆ ಸಂಸ್ಥೆಯ ವಿಶ್ವಸ್ಥ ಮಂಡಳಿಯ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರು. ಕರ್ನಾಟಕ ಸರಕಾರದ ಡಾ.ಬೆಟಗೇರಿ ಕೃಷ್ಣಶರ್ಮ ಪ್ರತಿಷ್ಠಾನದ ಅಧ್ಯಕ್ಷರು.
ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬೆಟಗೇರಿಯಲ್ಲಿ ಎಪ್ರಿಲ್ ೧೬, ೧೯೫೧ರಂದು ಜನನ.
ರಾಘವೇಂದ್ರ ಪಾಟೀಲ
 
   
ಉಪಾಧ್ಯಕ್ಷರು
 
ಪ್ರಸಿದ್ಧ ಮನೋಹರ ಗ್ರಂಥಮಾಲಾ’ದ ಸಂಪಾದಕ ಮತ್ತು ಪ್ರಕಾಶಕ. ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕ. ಸವಣೂರ ವಾಮನರಾವ್, ಗರುಡ ಸದಾಶಿವರಾವ್, ರಾಘವೇಂದ್ರ ಖಾಸನೀಸ, ದ.ಬಾ.ಕುಲಕರ್ಣಿ, ಎ.ಕೆ.ರಾಮಾನುಜನ್, ಒಂದಿಷ್ಟು ಹೊಸಕಥೆಗಳು, ಇವರ ಸಂಪಾದಿತ ಕೃತಿಗಳು. ಪುಸ್ತಕ ಪ್ರಕಾಶನ ಇವರ ಅನುವಾದಿತ ಕೃತಿ. ಖಿhe Use oಜಿ ಒಥಿಣh iಟಿ Iಟಿಜiಚಿಟಿ ಇಟಿgಟish ಆಡಿಚಿmಚಿ ಇವರ ಮಹಾಪ್ರಂಬಂಧ. ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷರಾಗಿ ಸೇವೆ.
ಪ್ರಕಾಶಕರ ಒಕ್ಕೂಟದ ವಿಶಿಷ್ಟ ಪ್ರಕಾಶಕ ಪ್ರಶಸ್ತಿ, ಸಂದೇಶ ವಿಶೇಷ ಗೌರವ ಪ್ರಶಸ್ತಿ, ಕನ್ನಡ ಪುಸ್ತಕ ಪ್ರಾಧಿಕಾರದ ಅತ್ಯುತ್ತಮ ಪ್ರಕಾಶಕ ಪ್ರಶಸ್ತಿ, ಅಂಕಿತ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ ಮುಂತಾದ ಗೌರವಗಳು.
ಧಾರವಾಡದಲ್ಲಿ ಡಿಸೆಂಬರ್ ೨೩, ೧೯೩೬ರಂದು ಜನನ.
ಡಾ. ರಮಾಕಾಂತ ಜೋಶಿ
 
   
ಉಪಾಧ್ಯಕ್ಷರು
 
ಹಿರಿಯ ಕಥೆಗಾರ್ತಿ. ಮುಳ್ಳುಗಳು, ಕೊನೆಯ ದಾರಿ, ಕವಲು, ಹಸಿವು, ಬಿಡುಗಡೆ ಕಥಾಸಂಕಲನಗಳು. ಗಂಡಸರು, ಶೋಷಣೆ, ಬಂಡಾಯ ಕಾದಂಬರಿಗಳು. ಮಹಿಳಾ ಸಾಹಿತ್ಯದಲ್ಲಿ ವೈಚಾರಿಕತೆ, ಆಧುನಿಕ ಕನ್ನಡ ಸಾಹಿತ್ಯದಲ್ಲಿ ಸಣ್ಣಕತೆ ವಿಮರ್ಶಾ ಕೃತಿಗಳು. ಭಿನ್ನ (ಮೂಲ : ಮರಾಠಿ), ಮತ್ತು ನದೀ ಕೆ ದ್ವೀಪ ಅನುವಾದಿತ ಕಾದಂಬರಿಗಳು. ಅತಿಥಿ ಕಥೆ ಪುಟ್ಟಣ್ಣ ಕಣಗಾಲರ ಕಥಾಸಂಗಮದಲ್ಲಿ ಚಲನಚಿತ್ರವಾಗಿದೆ. ಇವರ ಕಥೆಗಳು ದೇಶ-ವಿದೇಶಗಳ ಭಾಷೆಗಳಿಗೆ ಅನುವಾದಗೊಂಡಿವೆ.
ಕೇಂದ್ರ ಸಾಹಿತ್ಯ ಅಕಾದೆಮಿಯ ಅನುವಾದ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಗಳು ಸಂದಿವೆ.ಧಾರವಾಡದಕರ್ನಾಟಕ ಕಾಲೇಜಿನ
ಪ್ರಾಚಾರ್ಯರಾಗಿ ಸೇವೆಸಲ್ಲಿಸಿ, ನಿವೃತ್ತರು.
ಧಾರವಾಡದಲ್ಲಿ ಫೆಬ್ರುವರಿ ೨೨, ೧೯೪೫ರಂದು ಜನನ.
ಡಾ. ವೀಣಾ ಶಾಂತೇಶ್ವರ
 
   
ಕಾರ್ಯದರ್ಶಿ
 
ಧಾರವಾಡ, ಬೆಂಗಳೂರು ಮತ್ತು ಇಂಗ್ಲಂಡಿನಲ್ಲಿ ಕಾನೂನು ವ್ಯಾಸಂಗ. ನಾಟಿಂಗ್‌ಹ್ಯಾಮ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿ.
ಮಾನವ ಹಕ್ಕುಗಳಲ್ಲಿ ವಿಶೇಷ ಪರಿಣತಿ. ಹಲವಾರು ಸಂಸ್ಥೆ, ವಿಶ್ವವಿದ್ಯಾಲಯಗಳಿಗೆ ವಿಷಯ ತಜ್ಞರಾಗಿ, ಸಲಹೆಗಾರರಾಗಿ ಕಾರ್ಯ ನಿರ್ವಹಣೆ. ಪ್ರವೃತ್ತಿಯಿಂದ ಕಲಾವಿದರು.
ಇವರು ಭಾರತ ಸರ್ಕಾರದ ಗಣಿ ಕಾರ್ಮಿಕರ ಕಲ್ಯಾಣ ನಿಧಿ ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷರಾಗಿ, ಕರ್ನಾಟಕ ವಿಶ್ವದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಸೇವೆ.
ಕೃತಿಗಳು :
Law Relating to Human Rights, Basava and Human Rights, Human Rights, Women & Law, Objections- I am a Southernist, Working of Indian Constitution (Ed), The Majesty of Law (Ed) ªÀÄvÀÄÛ Beyond the Frame and Other Stories, ಮಾನವ ಹಕ್ಕುಗಳು ಮತ್ತು ಕಾನೂನು, ಆಕ್ಷೇಪ! ನಾನು ದಕ್ಷಣಿಗ, ಕಾನೂನು ಮತ್ತು ಬಡತನ ಕುರಿತು ಪ್ರಬಂಧಗಳು ಕಾನೂನು ಕುರಿತು ಕೃತಿಗಳು. ದೃಷ್ಟಿಕೋನ, ಕಥಾ ನಾಯಕಿಯ ಕಥೆ, ಸ್ಫೂಕಿ ಎಂಬ ಹಾವು ಮತ್ತು ಫ್ಯಾಸಿಸ್ಟ್ ಅಪ್ಪ, ಕಥಾಸಂಕಲನಗಳು. ನಾ ಬದುಕಲಿಕ್ಕೆ ಒಲ್ಲೆಪ್ಪಾ ದ್ವಿಪಾತ್ರ ನಾಟಕ.
ಧಾರವಾಡದಲ್ಲಿ ಜನೆವರಿ ೧೧, ೧೯೫೭ರಂದು ಜನನ
ಡಾ. ಲೋಹಿತ್ ನಾಯ್ಕರ್
 
   
ಸಹಕಾರ್ಯದರ್ಶಿಗಳು
 
ಡಾ. ಹ. ವೆಂ. ಕಾಖಂಡಿಕಿ ಕೆನರಾ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿ ಸ್ವಯಂನಿವೃತ್ತಿ. ಇಂಗ್ಲಿಷ್ ಮತ್ತು ಕನ್ನಡ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಹಾಗೂ ಕಾನೂನು ವ್ಯಾಸಂಗದಲ್ಲಿ (ವಿಶೇಷ)ಪದವಿ. ಬೇಂದ್ರೆಯವರ ಸಾಹಿತ್ಯದಲ್ಲಿ ಪ್ರಕೃತಿ ಮತ್ತು ಸಂಸ್ಕೃತಿ ಕುರಿತು ಮಹಾಪ್ರಬಂಧ. ಕವಿತೆ, ಅಂಕಣ ಬರಹ, ನಾಟಕ ಮತ್ತು ಚಿಂತನಶೀಲ ಬರಹಗಳನ್ನು ಪ್ರಕಟಿಸಿದ್ದಾರೆ. ಕೇಂದ್ರ ಸಾಹಿತ್ಯ ಅಕಾದೆಮಿಯಿಂದ ಭಾರತೀಯ ಸಾಹಿತ್ಯ ನಿರ್ಮಾಪಕರು ಮಾಲಿಕೆಯಲ್ಲಿ ಜಿ. ಬಿ. ಜೋಶಿ ಪುಸ್ತಕ ಪ್ರಕಟಣೆ. ಮಂದಾರ, ಸಮರ್ಪಣ, ಸತ್ಯ ಸಂಭ್ರಮ ಮುಂತಾದವುಗಳ ಸಂಪಾದನೆ.
ಗದಗದಲ್ಲಿ ಏಪ್ರಿಲ್ ೫, ೧೯೫೦ರಂದು ಜನನ.
ಡಾ. ಹ. ವೆಂ. ಕಾಖಂಡಿಕಿ
 
   
ಸಹಕಾರ್ಯದರ್ಶಿಗಳು
 
ಡೆಪ್ಯೂಟಿಚೆನ್ನಬಸಪ್ಪನವರು: ಜೀವನ ಮತ್ತು ಸಾಧನೆ ಇವರ ಮಹಾಪ್ರಂಬಂಧ.
ಕೃತಿಗಳು : ಕೃತಿ ಸಂಗಾತಿ, ರಂಗ ಸಂಗಾತಿ, ಪರಿಭಾವ, ಕನ್ನಡ ರಂಗಚಿಂತನೆ, ಚಿಂತಕರು-ಚಿಂತನಗಳು ಬಸವಣ್ಣ-ಮಹಾವೀರ, ಮರಿಕಲ್ಲಪ್ಪ ಮಲಶೆಟಿ
ಸಂಪಾದನೆ : ರನ್ನನ ಸಾಹಸಭೀಮ ವಿಜಯ : ಪರಾಮರ್ಶೆ, ಫ. ಗು. ಹಳ್ಳಕಟ್ಟಿ ಸಮಗ್ರ ಸಾಹಿತ್ಯ ಸಂಪುಟ:೯, ಬೆಳಗಾವಿ ಜಿಲ್ಲೆಯ ವೀರಶೈವ ದೇಶಗತಿಗಳು, ರಾಧಾನಾಟ, ಆತ್ಮ ಆವ ಕುಲ, ಸ್ಥಾವರವಲ್ಲದ ಬದುಕು, ಭರತ ಚಕ್ರಿಯ ದರ್ಶನ ಲೋಕ, ನಿಜ ಸುಖದ ನಿಲವು ಮುಂತಾದವು ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರು. ದೇಶನೂರಿನಲ್ಲಿ ಜರುಗಿದ ಬೈಲಹೊಂಗಲ ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ (ಜೂನ್ ೧೮, ೨೦೧೨) ಸರ್ವಾಧ್ಯಕ್ಷರು. ಡಾ. ಎಸ್.ಎಸ್. ಕೋತಿನ ವಿಮರ್ಶಾ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿಯ ಪುಸ್ತಕ ಬಹುಮಾನ, ಸೊಂಡೂರಿನ ಪ್ರಭುದೇವರ ಸಂಸ್ಥಾನ ಮಠದ ಬಸವ ಬೆಳಗು ಪ್ರಶಸ್ತಿ, ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ರಂಗ ಸನ್ಮಾನ ಲಭಿಸಿವೆ.
ಬೆಳಗಾವಿ ಜಿಲ್ಲೆಯ ದೇಗಾವಿ ಗ್ರಾಮದಲ್ಲಿ ಜುಲೈ ೧, ೧೯೪೭ರಂದು ಜನನ.
ಡಾ. ಬಾಳಣ್ಣ ಶೀಗಿಹಳ್ಳಿ
 
   
ಕೋಶಾಧ್ಯಕ್ಷರು/ಸಂಚಾಲಕರು
 
ಜಿ.ಬಿ. ಜೋಶಿಯವರ ಮೊಮ್ಮಗ. ಮನೋಹರ ಗ್ರಂಥಮಾಲೆಯ ವ್ಯವಸ್ಥಾಪಕ. ಜಡಭರತ’ ಪ್ರಕಾಶನ ಸಂಸ್ಥೆಯ ಸ್ಥಾಪಕ ಮತ್ತು ಪ್ರಕಾಶಕ. ಬಿ. ಕಾಂ. ಪದವಿ ಮತ್ತು ಮುದ್ರಣದಲ್ಲಿ ಡಿಪ್ಲೊಮಾ ಕೋರ್ಸ್. ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟನೆಯ ಮುಂಚೂಣಿಯಲ್ಲಿದ್ದಾರೆ.
ಧಾರವಾಡದಲ್ಲಿ ಜನೆವರಿ ೦೯, ೧೯೭೮ರಂದು ಜನನ.
ಶ್ರೀ ಸಮೀರ ಜೋಶಿ
 
   
ಸಲಹೆಗಾರರು
 
ಹಿರಿಯ ಕವಿ, ನಾಟಕಕಾರ, ಅನುವಾದಕ, ಅಂಕಣಕಾರ ಸಂಪಾದಕ ಮತ್ತು ನಟ.
ಕೃತಿಗಳು : ನೀನಾ, ಔರಂಗಜೇಬ ಮತ್ತು ಇತರ ಕವನಗಳು, ಪರದೇಶಿ ಹಾಡುಗಳು, ಅಯಸ್ಕಾಂತ, ಅಪರಂಪಾರ, ನಿನ್ನ ಮರೆಯೂs ಮಾತು, ಕುಲಾಯಿ, ನೂರಾರು ಪದ್ಯಗಳು ಮುಂತಾದ ೧೬ ಕವನ ಸಂಕಲನಗಳು. ಮಾವ ಮತ್ತು ಇತರ ಕತೆಗಳು, ಹಕ್ಕಿಗಳು ಕಥಾಸಂಕಲನಗಳು. ಆಧುನಿಕ ಕನ್ನಡ ಹಿಂದೀ ಕಾವ್ಯ, ಅನುಶೀಲನ, ರಂಗಾಯಣ, ವಿವೇಚನ, ಅಭಿಮುಖ, ಪರಿಭಾವನ, ಅನುಸ್ವಾದನ ವಿಮರ್ಶೆ. ಒಂದ್ ಗೆಸ್ಟ್ ಬೇಕಾಗೇತಿ ಲಲಿತ ಪ್ರಬಂಧ. ಚಹಾದ ಜೋಡಿ ಚೂಡಾದ್ಹಾಂಗ ಪ್ರಜಾವಾಣಿ ಅಂಕಣ ಬರಹಗಳ ಐದು ಸಂಪುಟಗಳು. ಆಷಾಢದ ಒಂದುದಿ, ಆಧೇ ಅಧೂರೆ, ಅಂಧಯುಗ ಮುದ್ರಾರಾಕ್ಷಸ, ಶಸ್ತ್ರಸಂತಾನ, ಕೋರ್ಟ ಮಾರ‍್ಶಲ್, ಚೋರ ಚರಣದಾಸ, ಆಕಾಶಭೇರಿ, ಕಾಲಕೆಳಗಿನ ನೆಲ, ಟೈಮಮಶೀನ್ ಮುಂತಾದವು ಅನುವಾದಿತ ನಾಟಕಗಳು. ಸಂಕ್ರಮಣ ಪತ್ರಿಕೆಯ ಆರಂಭದಲ್ಲಿ ಸಂಪಾದಕರಾಗಿದ್ದರು. ೨೦೦೨ ರಿಂದ ೨೦೦೮ರ ವರೆಗೆ ಸಂಕಲ, ದ್ವೈಮಾಸಿಕ ಸಾಹಿತ್ಯ ಪತ್ರಿಕೆಯ ಸಂಪಾದನೆ. ಕೇಂದ್ರ ಸಾಹಿತ್ಯ ಅಕಾದೆಮಿಯ ಕನ್ನಡ ಭಾಷಾ ಸಮಿತಿಯ ಸಂಚಾಲನೆ.
ರಾಷ್ಟ್ರ, ರಾಜ್ಯ ಮಟ್ಟದ ಕವಿಗೋಷ್ಠಿಗಳ ಅಧ್ಯಕ್ಷತೆ, ೨೦೧೧ರಲ್ಲಿ ಜರುಗಿದ ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ, ೨೦೦೯ರಲ್ಲಿ ದುಬಾಯಿಯಲ್ಲಿ ನಡೆದ ೬ನೇ
ವಿಶ್ವ ಕನ್ನಡ ಸಮ್ಮೇಳನ ಹಾಗೂ ಅಲ್ಲಿಯ ಕರ್ನಾಟಕ ಸಂಘದ ರಜತ ಮಹೋತ್ಸವದ ಸರ್ವಾಧ್ಯಕ್ಷತೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ದಿನಕರ ದೇಸಾಯಿ ಪ್ರಶಸ್ತಿ, ಮುಂತಾದ ಪ್ರಶಸ್ತಿಗಳು ಸಂದಿವೆ.
ಧಾರವಾಡ ಜಿಲ್ಲೆಯ ಯಾದವಾಡದಲ್ಲಿ ನವೆಂಬರ್ ೩, ೧೯೩೯ರಂದು ಜನನ.
ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ
 
   
ಸಲಹೆಗಾರರು
 
ಕವಿ, ವಿಮರ್ಶಕ, ಸಂಪಾದಕ, ವಾಗ್ಮಿ.
ನವ್ಯ ಮಾರ್ಗದ ಕಾದಂಬರಿಗಳು ಇವರ ಪಿ.ಎಚ್.ಡಿ., ಮಹಾಪ್ರಬಂಧ. ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷರಾಗಿ ಸೇವೆ.
ಕೃತಿಗಳು : ಅಜ್ಜಗಾವಲು, ಬರುವುದೇನುಂಟೊಮ್ಮೆ, ತಲೆ ಎತ್ತಿ ಶರಣು, ಅಲ್ಲಮ ಪ್ರಭುವಾದ ಕವನ ಸಂಕಲನಗಳು. ಕೃತಿನೋಟ, ಅಚ್ಚುಕಟ್ಟು, ನೆಲೆಗಟ್ಟ್ಟು, ಪ್ರಸಂಗೋಚಿತ ವಿಮರ್ಶೆ. ಗಂಧಕೊರಡು, ಸ್ವಾತಂತ್ರ್ಯದ ಸವಿನೀರು, ಪ್ರಬಂಧ ಪ್ರಪಂಚ, ಕರ್ಕಿಯವರ ಸಮಗ್ರ ಸಾಹಿತ್ಯ, ಸಂವಾದ ಇತ್ಯಾದಿ ಸಂಪಾದಿತ ಕೃತಿಗಳು.
ಹುಬ್ಬಳ್ಳಿಯಲ್ಲಿ ಮೇ ೧೮, ೧೯೪೭ರಂದು ಜನನ.
ಡಾ. ಶ್ಯಾಮಸುಂದರ ಬಿದರಕುಂದಿ
 
   
ಸಲಹೆಗಾರರು
 
ಜಾನಪದ ಸಾಹಿತ್ಯ, ಮಹಿಳೆಯರ ಸಾಹಿತ್ಯ ಕುರಿತ ವಿಶೇಷ ಅಧ್ಯಯನ. ಕರ್ನಾಟಕ ವಿಶ್ವವಿದ್ಯಾಲಯ ಕನ್ನಡ ವಿಭಾಗದ ವಿಶ್ರಾಂತ ಪ್ರಾಧ್ಯಾಪಕಿ. ಅಕ್ಕಮಹಾದೇವಿ ಮತ್ತು ಇತರ ಲೇಖನಗಳು, ಮಹಿಳೆ- ಧರ್ಮ-ಸಮಾಜ, ಮಹಿಳೆ - ಸಾಹಿತ್ಯ - ಸಮಾಜ, ಮೊದಲಾದವು ಇವರ ವಿಮರ್ಶಾ ಕೃತಿಗಳು. ಅಕ್ಕಮಹಾದೇವಿ ಇವರ ಪಿಎಚ್.ಡಿ. ಮಹಾಪ್ರಬಂಧ. ಜನಪದ ತ್ರಿಪದಿಗಳು, ಜನಪದ ಒಡಪುಗಳು, ಜಾನಪದ ವೈದ್ಯ, ಅಕ್ಕಮಹಾದೇವಿ ಸಣ್ಣಾಟ ಸಂಪಾದಿತ ಕೃತಿಗಳು . ಕದಳಿ ಪ್ರಶಸ್ತಿ, ಜಾನಪದ ಅಕಾಡೆಮಿ ಗ್ರಂಥ ಪ್ರಶಸ್ತಿಗೆ ಭಾಜನರು.
ಮುದ್ದೇಬಿಹಾಳದಲ್ಲಿ ಜೂನ್ ೧೯, ೧೯೫೪ರಂದು ಜನನ.
ಶಾಂತಾ ಇಮ್ರಾಪೂರ
 
   
ಸಲಹೆಗಾರರು
 
ಕತೆಗಾರ, ಕಾದಂಬರಿಕಾರ, ಕವಿ.
ಕೃತಿಗಳು ಅಮೀನಪುರದ ಸಂತೆ, ಮೊಲೆವಾಲು
ನಂಜಾಗಿ ಕಥಾಸಂಕಲನಗಳು, ಹವ ಕಾದಂಬರಿ, ಅಕ್ವೇರಿಯಂ ಮೀನು ಕವನಸಂಕಲನ, ಮೂರೂಸಂಜಿ ಮುಂದ ಧಾರವಾಡ, ಪ್ರಬಂಧ ಸಂಕಲನ, ಜ್ಞಾನೇಶ್ವರನ ನಾಡಿನಲ್ಲಿ ಪ್ರವಾಸಕಥನ, ಅಂತರ್ಗತ, ಅಭಿಮುಖ, ಗಿರಡ್ಡಿ ಗೋವಿಂದರಾಜ ವಿಮರ್ಶೆ, ರಾಜಶೇಖರ ನೀರಮಾನ್ವಿಯವರ ಕಥೆಗಳು, ಗಿರಡ್ಡಿಯವರ ಹಿಡಿಯದ ಹಾದಿ, ಪ್ರಸ್ತುತಿ -ರಾಘವೇಂದ್ರ ಪಾಟೀಲರ ಅಭಿನಂದನಾಗ್ರಂಥ, ಸತ್ಯಾಶ್ರಯ, ಬಾಗಿಲು, ತಿರುಳ್ಗನ್ನಡ ಸಂಪಾದಿತ ಕೃತಿಗಳು.
ಅಮೀನಪುರದ ಸಂತೆ ಕಥಾಸಂಕಲನ ಗುಲಬರ್ಗಾ ವಿಶ್ವವಿದ್ಯಾಲಯದ ಪದವಿ ವರ್ಗಗಳಿಗೆ ಪಠ್ಯ. ‘ಹವನ’ ತೆಲುಗು ಭಾಷೆಗೆ ಅನುವಾದಗೊಂಡಿದೆ. ಇಂಗ್ಲಿಷ್ ಅನುವಾದ ಪ್ರಕಟಣೆಯಲ್ಲಿ. ಕೆಲವು ಕಥೆಗಳು ಪಠ್ಯಪುಸ್ತಕಗಳಲ್ಲಿ ಸೇರ್ಪಡೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ದಕ್ಷಿಣ ಭಾರತ ಹಿಂದಿ ಪ್ರಚಾರಸಭಾ ಮದ್ರಾಸದ ಕನ್ನಡ ಸಾಹಿತ್ಯಕಾರ ಪ್ರಶಸ್ತಿ, ಮುದ್ದಣ ದತ್ತಿನಿಧಿ ಪ್ರಶಸ್ತಿ, ಗಳಗನಾಥ ಪ್ರಶಸ್ತಿ, ಹಾವನೂರ ಪ್ರತಿಷ್ಠಾನ ಪ್ರಶಸ್ತಿ ಮುಂತಾದವುಗಳು.
ಹುನಗುಂದದ ವಿ.ಎಂ.ಎಸ್.ಆರ್.ವಸ್ತ್ರದ ಕಾಲೇಜದಲ್ಲಿ ಪ್ರಾಚಾರ್ಯರಾಗಿ ನಿವೃತ್ತರು.
ಕೊಪ್ಪಳ ಜಿಲ್ಲೆಯ ಬಿಸರಹಳ್ಳಿಯಲ್ಲಿ ಜೂನ್ ೫, ೧೯೪೬ರಂದು ಜನನ.
ಶ್ರೀ ಮಲ್ಲಿಕಾರ್ಜುನ ಹಿರೇಮಠ
 
   
ಸಲಹೆಗಾರರು
 
ಕರ್ನಾಟಕ ಆಡಳಿತ ಸೇವೆಯಲ್ಲಿ ಹಿರಿಯ ಅಧಿಕಾರಿಯಾಗಿ, ಧಾರವಾಡ ವಲಯದ ಶಿಕ್ಷಣ ಇಲಾಖೆ ಆಯುಕ್ತರಾಗಿ ನಿವೃತ್ತರು.
ಕೃತಿಗಳು : ಥೇಮ್ಸದಿಂದ ಟೈಬರ್‌ವರೆಗೆ, ಕೈಲಾಸ ಮಾನಸ, ಮರಳುಗಾಡಿನ ಬೆಡಗು, ಆಗ್ನೇಯದಂಗಳದಲ್ಲಿ, ಗಾಂಧಿ ಕೃಷ್ಣರ ನಾಡಿನಲ್ಲಿ, ಅಪೂರ್ವ ಪೂರ್ವ, ಉತ್ತರ ವಿಹಾರ ಪ್ರವಾಸಕಥನಗಳು. ಬೇರುಗಳು ಕಥಾಸಂಕಲನ. ಕೌದಿ ಕಂಬಳಿ, ಜೋಳ ಜೋಳೇಶ್ವರ ಲಲಿತಪ್ರಬಂಧ ಸಂಕಲನಗಳು. ಬೀದರ, ಕಲಬುರ್ಗಿ, ವಿಜಯಪುರ, ಕಿತ್ತೂರು, ಸವದತ್ತಿ ಪಾರಂಪರಿಕ ಸ್ಥಳಗಳ ಪರಂಪರೆ ಮಾಲಿಕೆಯ ಬರಹಗಳು.
ಗಾಂಧಿಯೊಂದಿಗೆ ಒಬ್ಬ ನಾಸ್ತಿಕ, ಅನುವಾದಿತ ಕೃತಿ.
ಎರಡು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ಶಿವಮೊಗ್ಗ ಕರ್ನಾಟಕ ಸಂಘ ಹಾಗೂ ಇತರ ಬಹುಮಾನಗಳಿಗೆ ಭಾಜನರು. ಇವರ ಲಲಿತ ಪ್ರಬಂಧಗಳು ಪದವಿ ತರಗತಿಗಳಿಗೆ ಪಠ್ಯಗಳಾಗಿವೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಿಕ್ಕೂಡ
ಗ್ರಾಮದಲ್ಲಿ ಮೇ ೨೬, ೧೯೫೨ರಂದು ಜನನ.
ಶ್ರೀ ವೆಂಕಟೇಶ ಮಾಚಕನೂರ
 
   
ಸಲಹೆಗಾರರು
 
ಜೀವವಿಮಾ ನಿಗಮದಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ನೌಕರ ಸಂಘದ ಸಕ್ರಿಯ ಕಾರ್ಯಕರ್ತರು. ಅನೇಕ ಸಾಮಾಜಿಕ ಸಂಘಟನೆಗಳ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಚಿತ್ರಾಫಿಲ್ಮ ಸಂಸ್ಥೆಯ ಕಾರ್ಯದರ್ಶಿಯಾಗಿ ಅನೇಕ ವರ್ಷಗಳಿಂದ ಕಾರ್ಯನಿರತರಾಗಿದ್ದಾರೆ.
ಧಾರವಾಡದಲ್ಲಿ ನವೆಂಬರ್ ೧೧, ೧೯೫೨ರಂದು ಜನನ.
ಶ್ರೀ ಅಬ್ದುಲ್ ರೆಹಮಾನ್ ಎಂ. ಖಾನ್
 
   
ಸಲಹೆಗಾರರು
 
ಮೂಲತಃ ಕವಿ.
ಕೃತಿಗಳು : ಪರಿಸರದಲ್ಲಿ, ಪಂಚಾಗ್ನಿ ಮಧ್ಯೆ, ನಾನು ನನ್ನವರು, ತಾಜಮಹಲಿನ ಹಾಡು, ಬಿಂಬದೊಳಗಣ ಮಾತು, ಕವನಸಂಕಲನಗಳು ಮತ್ತು ನಾನೆಂಬ ಮಾಯೆ ಸಮಗ್ರ ಕಾವ್ಯ. ಆಯ್ದ ಕವಿತೆಗಳ ಇಂಗ್ಲಿಷ್ ಅನುವಾದ ದಿ ಡಾಟರ್ ಆಫ್ ಫೈರ್ ಅದರ ಪೊಯಮ ಇಂಗ್ಲಷಿಗೆ. ಕೆಲವು ಕವಿತೆಗಳು ಇಂಗ್ಲಿಷ್, ಹಿಂದಿ, ತೆಲಗು ಭಾಷೆಗಳಿಗೆ ಅನುವಾದಗೊಂಡಿವೆ. ಬಳ್ಳಾರಿ ಜಿಲ್ಲೆಯ ಸಿರಿಗೆರೆಯಲ್ಲಿ ಜರುಗಿದ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ. ಹಲವಾರು ಪ್ರಶಸ್ತಿಗಳ ಆಯ್ಕೆ ಸಮಿತಿ, ಸಂಪಾದಕ ಮಂಡಳಿ ಮತ್ತು ರಾಜ್ಯ ಸಾಹಿತ್ಯ ಅಕಾಡೆಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಸಿಂಡಿಕೇಟ, ಸಿನೇಟ ಸದಸ್ಯರಾಗಿ ಕಾರ್ಯಮಾಡಿದ್ದಾರೆ. ‘ಸಂಸ್ಕೃತಿ ಸಂಗ್ರಾಮ’ ಹೆಸರಿನ ಪ್ರತಿಷ್ಠಾನ ಸ್ಥಾಪಕಿ. ಕರ್ನಾಟಕ ಸರಕಾರ ರಾಜ್ಯೋತ್ಸವ ಪ್ರಶಸ್ತಿ , ಡಾ. ಬಿ. ಆರ್. ಅಂಬೇಡ್ಕರ್ ಪ್ರಶಸ್ತಿ , ಮಹಾರಾಷ್ಟ್ರದ ಸಾವಿತ್ರಿ ಫುಲೆ ಪ್ರಶಸ್ತಿ ಸಂದಿವೆ. ಧಾರವಾಡದ ಜೆ.ಎಸ್.ಎಸ್.ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿ ನಿವೃತ್ತರು.
ಬಳ್ಳಾರಿ ಜಿಲ್ಲೆಯ ಕೊಟ್ಟೂರಲ್ಲಿ ಮಾರ್ಚ ೧, ೧೯೫೬ ರಂದು ಜನನ.
ಪ್ರೊ. ಬಿ. ಸುಕನ್ಯಾ
 
   
ಸಲಹೆಗಾರರು
 
ಧಾರವಾಡ ಹಿರೇಮಲ್ಲೂರ ಈಶ್ವರನ್ ಪಿ . ಯು . ವಿಜ್ನಾನ ಕಾಲೇಜಿನ ಪ್ರಾಂಶುಪಾಲರು. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಉತ್ತಮ ಸಂಘಟಕ,
ವಾಗ್ಮಿ. ತಮ್ಮ ಕಾಲೇಜಿನಲ್ಲಿ ಪಠ್ಯೇತರ ಆಸಕ್ತಿಗಳಿಗೆ ಗರಿಷ್ಟ ಪ್ರಮಾಣದ ಪೋಷಣೆ.
ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮಲ್ಲೂರಿನಲ್ಲಿ ಜುಲೈ ೧, ೧೯೭೨ರಂದು ಜನನ.
ಶ್ರೀ ಶಶಿಧರ ತೋಡಕರ
 
   
ಸಲಹೆಗಾರರು
 
ರಾಜ್ಯಶಾಸ್ತ್ರ, ಮಾನಸಶಾಸ್ತ್ರದಲ್ಲಿ ಸ್ನಾತಕೋತ್ತರ
ಪದವಿ. ವಿಮರ್ಶೆ, ಅನುವಾದ, ನಾಟಕನಿರ್ದೇಶನ, ಸಂಘಟನೆ, ನಟನೆ, ನೇಪಥ್ಯ ಪುಸ್ತಕ ಪ್ರಕಾಶನ ಇವರ ಆಸಕ್ತಿಗಳು. ಕರ್ನಾಟಕ ಕಲೋದ್ಧಾರಕ-ಸಂಘದ ಹಿರಿಯ ಸದಸ್ಯ. ೨೨ನೆಯ ವಯಸ್ಸಿನಲ್ಲೂ ಕರ್ನಾಟಕದ ಬೇರೆಬೇರೆ ರಂಗತಂಡಗಳಿಂದ ನಾಟಕ ಪ್ರದರ್ಶನಗಳ ಎರ್ಪಾಡು.
ಆಕಾಶವಾಣಿಗಾಗಿ ರೂಪಕ, ಲಘು ಹರಟೆಗಳನ್ನು ಬರೆದಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಸಂವಿಧಾನ, ಇತಿಹಾಸ, ರಾಜ್ಯಶಾಸ್ತ್ರ ಕುರಿತು ಮಾರ್ಗದರ್ಶನ. ಅಂದಿನ ಧಾರವಾಡ ಕುರಿತ ಶ್ರೀಮಂತ ನೆನಪುಗಳನ್ನು ಹೊಂದಿದ್ದಾರೆ. ಕೆ.ಇ.ಬೋರ್ಡಿನ ವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ನಿವೃತ್ತರು.
ಬಾಗಲಕೋಟ ಡಿಸೆಂಬರ್ ೨೫, ೧೯೪೧ರಂದು ಜನನ.
ಹರ್ಷ ಡಂಬಳ
 
   
ಸಲಹೆಗಾರರು
 
ಸಾಹಿತ್ಯ ಪ್ರಕಾಶನ ಸಂಸ್ಥೆಯ ಸ್ಥಾಪಕ ಸಂಪಾದಕ, ಪ್ರಕಾಶಕ. ೨೫ ವರ್ಷಗಳಲ್ಲಿ ಸಾಹಿತ್ಯ ಪ್ರಕಾಶನದಿಂದ ಸುಮಾರು ೫೦೦ ಕೃತಿಗಳನ್ನು ಪ್ರಕಟಿಸಿದ್ದಾರೆ. ಆ U U ಪತ್ರಿಕೆಗಳ ಅಂಕಣಗಳಲ್ಲಿ ವ್ಯಕಿ ಚಿ v ಗಳನ್ನು ಬರೆಯುತ್ತಿರುತ್ತಾರೆ. ಅನುವಾದದಲ್ಲಿ ಇವರಿಗೆ ಆಸಕ್ತಿ. ಯಶಸ್ಸಿನ ರಹಸ್ಯಗಳು ಇವರ ಪ್ರಕಟಿತ ಕೃತಿ. ರಾಮಕೃಷ್ಣ ವಿವೇಕಾನಂದ ಆಶ್ರಮದ ಟ್ರಸ್ಟಿ. ಪರಿಸರ ವೇದಿಕೆ, ಡಿ.ಎಸ್.ಕರ್ಕಿ ಸಾಹಿತ್ಯ ವೇದಿಕೆ ಮೊದಲಾದ ಸಂಸ್ಥೆಗಳಲ್ಲಿ ಕ್ರಿಯಾಶೀಲರು. ಬಹೆರನ್‘ಸಾರ್ಥ ಫೌಂಡೇಶನ್’ದ ಅತ್ಯುತ್ತಮ ಸಾಹಿತ್ಯ ಪ್ರಕಾಶಕ ಪ್ರಶಸ್ತಿ, ಮತ್ತು ಇತರ ಪ್ರಶಸ್ತಿಗಳಿಗೆ ಭಾಜನರು.
ಹುಬ್ಬಳ್ಳಿಯಲ್ಲಿ ಡಿಸೆಂಬರ್ ೫, ೧೯೫೯ರಂದು ಜನನ.
ಶ್ರೀ ಎಂ. ಎ. ಸುಬ್ರಹ್ಮಣ್ಯ
 
   
   
ಸಲಹೆಗಾರರು
 
ಬಿ.ಕಾಂ.ಎಲ್.ಎಲ್.ಬಿ(ಸ್ಪೇಶಲ್) ಪದವೀಧರು.
ಮುಂಬಯಿಯ ಮಫತ್‌ಲಾಲ್ ಗ್ರೂಪ್‌ನಲ್ಲಿ ೨೬ವರ್ಷ ಸೇವೆ;
ಅಲ್ಲಿ ಮಫತ್‌ಲಾಲ್ ಕರ್ಮಚಾರಿ ಸಂಘಟನೆಯಲ್ಲಿ ಕಾರ್ಯದರ್ಶಿ. ನಿವೃತ್ತಿಯ ನಂತರ ಧಾರವಾಡಕ್ಕೆ ಬಂದಿರುವ ಇವರು ವಕೀಲಿ ವೃತ್ತಿಯ ಜತೆಗೆ
ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಹವ್ಯಾಸಿ ಕಲಾವಿದರಾಗಿ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಅವುಗಳಲ್ಲಿ ಉಧ್ವಸ್ಥ ಧರ್ಮಶಾಲಾ ನಾಟಕವೂ ಒಂದು.
ಬಾಗಲಕೋಟೆಯಲ್ಲಿ ಜೂನ್ ೦೫, ೧೯೫೧ರಂದು ಜನನ.
ರಮೇಶ ಪರ್ವತಿಕರ
 
   
ಸಲಹೆಗಾರರು
 
ಕರ್ನಾಟಕ ಸರಕಾರದ ಎನ್.ಸಿ.ಸಿ. ಇಲಾಖೆಯಲ್ಲಿ ಕೆಲಸಮಾಡಿ ನಿವೃತ್ತರು. ಈಗ ವಕೀಲಿ ವೃತ್ತಿಯ ಜೊತೆಗೆ ಸಮಾಜಸೇವೆಯಲ್ಲಿ ತೊಡಗಿದ್ದಾರೆ. ಸಾಧನಕೇರಿ ಯುವಕ ಮಂಡಳ, ಸಾಧನಕೇರಿ ವಿದ್ಯಾಭಿವೃದ್ಧಿ ಸಮಿತಿ, ಅನ್ವೇಷಣಕೂಟ ಮೊದಲಾದ ಸಂಘಟನೆಗಳಲ್ಲಿ ಸಕ್ರಿಯರು. ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ್ ಟ್ರಸ್ಟ್‌ದ ಸದಸ್ಯರು. ವಿಪ್ರ ಸೌಹಾರ್ದ ಸಹಕಾರಿ ಕ್ರೆಡಿಟ್ ಬ್ಯಾಂಕಿನ ಅಧ್ಯಕ್ಷರು.
ಕೊಪ್ಪಳ ಜಿಲ್ಲೆಯ ಕ್ಯಾದಿಗುಪ್ಪಿ ಗ್ರಾಮದಲ್ಲಿ ಅಗಸ್ಟ್ ೧೦, ೧೯೪೮ರಂದು ಜನನ.
ವೆಂಕಟೇಶ ದೇಸಾಯಿ
 
   
ಸಲಹೆಗಾರರು
 
ಪದವಿ ಪಡೆದ ನಂತರ ಕೆಲಕಾಲ ಸಿಂಡಿಕೇಟ ಬ್ಯಾಂಕಿನಲ್ಲಿ ಸೇವೆ. ಈಗ ಫ್ಲೆಕ್ಸ್, ಎಲ್‌ಇಡಿ ಬ್ಯಾನರು, ಬೋರ್ಡು, ಜಾಹೀರಾತು ಉದ್ಯಮದಲ್ಲಿ ನಿರತರು. ನಾಟಕ, ಸಂಗೀತ, ಸಾಹಿತ್ಯದಲ್ಲಿ ಆಸಕ್ತಿಯುಳ್ಳವರು. ಧಾರವಾಡದ ‘ಕರ್ನಾಟಕ ಕಲೋದ್ಧಾರಕ ಸಂಘ’ದ ಹೊಣೆ ಹೊತ್ತು ಮತ್ತೆ ಕ್ರಿಯಾಶೀಲವಾಗುವಂತೆ ಪ್ರಯತ್ನಿಸುತ್ತಿದ್ದಾರೆ. ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರು.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕುನ್ನಾಳದಲ್ಲಿ ಅಕ್ಟೋಬರ್ ೦೮, ೧೯೫೪ರಂದು ಜನನ.
ಶ್ರೀನಿವಾಸ ಎನ್.ದೇಶಪಾಂಡೆ
 
   
ಸಲಹೆಗಾರರು
 
ವಾಣಿಜ್ಯ ವಿಭಾಗದಲ್ಲಿ ಸ್ನಾತಕೋತ್ತರ ಪದವೀಧರರು. ಆಲ್ ಇಂಡಿಯಾ ಕೇಡರದ ಇಂಡಿಯನ್ ಸ್ಟಾಟಿಸ್ಟಿಕಲ್ ಸರ್ವಿಸ್ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರೆಂದು ಸೇವೆ
ಸಲ್ಲಿಸುತ್ತಿದ್ದಾರೆ. ಮಹಿಪತಿದಾಸರ ವಂಶಸ್ಥರಾದ ಇವರು ಪ್ರಸ್ತುತ ಧಾರವಾಡಲ್ಲಿದ್ದು ಸಾಹಿತ್ಯಿಕ, ಸಾಂಸ್ಕೃತಿಕ, ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಅಧ್ಯಯನಕ್ಕೆ ಅನುಕೂಲ ಮಾಡಿಕೊಡುವ ಸಂಸ್ಥೆಯ ಜತೆ ಕೈಗೂಡಿಸಿದ್ದಾರೆ.
ಹಾವೇರಿಯಲ್ಲಿ ಡಿಸೆಂಬರ್ ೨೨, ೧೯೫೮ರಂದು ಜನನ.
ಅನಿಲ ಕಾಖಂಡಿಕಿ
 
   
ಸಲಹೆಗಾರರು
 
ಇಂಗ್ಲಿಷ್ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಕೆಲಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ನಂತರ ಇವರು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನಲ್ಲಿ ಅಧಿಕಾರಿಯಾಗಿ ನಿವೃತ್ತಿ ಹೊಂದಿದ್ದಾರೆ. ಅಭಿನಯ ಭಾರತಿ ಮತ್ತು ಕಲೋದ್ಧಾರಕ ಸಂಘಗಳ ರಂಗಚಟುವಟಿಕೆಗಳಲ್ಲಿ ಸೇವೆ. ಧಾರವಾಡದ ನಾರಾಯಣಪುರ ಕಲ್ಯಾಣ ಸಂಸ್ಥೆಯ ಸಂಚಾಲಕರಾಗಿದ್ದಾರೆ.
ರಾಯಚೂರ ಜಿಲ್ಲೆಯ ಲಿಂಗಸುಗೂರ ತಾಲೂಕಿನ ಚಿತ್ತಾಪುರದಲ್ಲಿ ಮಾರ್ಚ ೨೮, ೧೯೪೮ರಂದು ಜನನ.
ಜಯತೀರ್ಥ ಜಹಗೀರದಾರ
 
   
ಸಲಹೆಗಾರರು
 
ಬಿ.ಕಾಂ, ಸಿ.ಎ., ಐ.ಐ.ಬಿ, ಪದವೀಧರರಾಗಿರುವ ಸುಧೀಂದ್ರ ದೇಶಪಾಂಡೆಯವರು, ಕೆನರಾ ಬ್ಯಾಂಕಿನಲ್ಲಿ ಶಾಖಾಧಿಕಾರಿ ಹುದ್ದೆಯಲ್ಲಿ ನಿವೃತ್ತರು. ದೇಶದ ವಿವಿಧೆಡೆ ಕೆನರಾ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿದ ಅನುಭವ ಇವರಿಗಿದೆ. ನಿವೃತ್ತಿಯ ನಂತರ ವಿಪ್ರ-ಸೌಹಾರ್ದ ಬ್ಯಾಂಕಿನ ಉಪಾಧ್ಯಕ್ಷರಾಗಿ ಬ್ಯಾಂಕಿನ ಶ್ರೇಯೋಭಿವೃದ್ಧಿಗೆ ಕಾರಣರಾಗಿದ್ದಾರೆ. ಸಾಂಸ್ಕೃತಿಕ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿರುವರು.
ಹಾವೇರಿ ಜಿಲ್ಲೆಯ ಹಾನಗಲ್ಲಿನಲ್ಲಿ ಮೇ ೧೨, ೧೯೪೮ರಂದು ಜನನ.
ಎಸ್.ಎಂ.ದೇಶಪಾಂಡೆ
 
   
ಸಲಹೆಗಾರರು
 
ಕರ್ನಾಟಕ ಸರ್ಕಾರದ ಪಂ.ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ದಲ್ಲಿ ಅರೆಸರಕಾರಿ ಉದ್ಯೋಗಿ. ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಬಿ.ಎಡ್ ಪದವಿ ಪಡೆದಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ಸಂಗೀತ, ಸಾಹಿತ್ಯ, ನಾಟಕ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ವಿಶೇಷ ಆಸಕ್ತಿ. ಅನೇಕ ಖ್ಯಾತ ಸಂಗೀತಗಾರರಿಗೆ ತಂಬೂರಿ ಸಾಥ್ ನೀಡಿದ್ದಾರೆ. ಸುಗಮ ಸಂಗೀತ ಕಲಿಯುತ್ತಿದ್ದಾರೆ. ಹುಲಗೆಪ್ಪ ಕಟ್ಟಿಮನಿ ಅವರ ನಿರ್ದೇಶನದ ಅಳಿಲು ರಾಮಾಯಣ ನಾಟಕದಲ್ಲಿ ಲಕ್ಷ ಣನ ಪಾತ್ರ; ವಾಲಿ ಸುಗ್ರೀವ ಕಾಳಗ ದೊಡ್ಡಾಟದಲ್ಲಿ ಅಭಿನಯ. ಶ್ರೀ ಸಾಯಿಚರಣ ಸಾಂಸ್ಕೃತಿಕ ಅಭಿವೃದ್ಧಿ ಸಂಸ್ಥೆಯ ಮುಖಾಂತರ ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ನಿಪನಾಳ ಗ್ರಾಮದಲ್ಲಿ ಏಪ್ರಿಲ್ ೦೫, ೧೯೮೭ರಂದು ಜನನ.
ಅಶೋಕ ರಾಮಚಂದ್ರ ನಿಂಗೋಲಿ
 
   
ಸಲಹೆಗಾರರು
 
ಧಾರವಾಡದ ಪ್ರತಿಷ್ಠಿತ ವ್ಯಾಪಾರಿ ಮನೆತನದ ಹಿನ್ನೆಲೆಯಿಂದ ಬಂದವರು.
ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಚಟುವಟಿಕೆಗಳಲ್ಲಿ
ವಿಶೇಷ ಆಸಕ್ತಿ ಹೊಂದಿರುವರು. ಇವರು ಸಂಘಟನೆಯಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಂಡವರು.
ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಮಾರ್ಚ ೦೨, ೧೯೭೬ರಂದು ಜನನ.
ಪ್ರವೀಣ ದೊಡ್ಡಮನಿ